ಬಸವಣ್ಣ ಮತ್ತು ಸ್ತ್ರೀ ಸಮಾನತೆ

Author Name : Dr. (Mrs.) Neelambika Policepatil (Sherikar)
Volume : I, Issue :XI,July - 2016
Published on : 2016-06-07 , By : IRJI Publication

Abstract :

ಮಹಾಶಿವಶರಣೆ ಅಕ್ಕಮಹಾದೇವಿ ಈ ವಚನದ ಮುಖಾಂತರ ಬಸವಣ್ಣನವರ ಇಡೀ ವ್ಯಕ್ತಿತ್ವದ ಪರಿಚಯ ಮಾಡಿಸುತ್ತಾಳೆ. ಅಕ್ಕನಂತೆ ಇತರ ಶರಣರು ಸಹ ಬಸವಣ್ಣನವರನ್ನು ಇದೇ ದೃಷ್ಟಿಕೋನದಿಂದ ಕಂಡಿದ್ದಾರೆ. ಪ್ರಭುದೇವರು ‘ಎನಗೆಯೂ ಗುರು ನಿನಗೆಯೂ ಗುರು ಜಗಕ್ಕೆಲ್ಲಕೂ ಗುರು ಬಸವಣ್ಣ’ ಎಂದರೆ ಚನ್ನಬಸವಣ್ಣನವರು “ಶರಣರ ಸಮತೆಯ ನಿಧಿ ಬಸವಯ್ಯಾ ಭಕ್ತಿಯ ಬೆಳೆಸಿರಿ ಬಸವಯ್ಯ’ – ಎನ್ನುತ್ತಾರೆ. “ಸುಖವೊಂದು ಕೋಟಿ ಬಂದಲ್ಲಿ ಬಸವಣ್ಣ ನೆನೆವುದು, ದುಃಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು” ಮಡಿವಾಳಮಾಚಿದೇವರು ನುಡಿಯುತ್ತಾರೆ.